ಮೊದಲ ಮಾತು
ನಮ್ಮಲ್ಲಿ ಇತ್ತೀಚಿನ ವರೆಗೂ ಪ್ರೀತಿಯ
ಬಗ್ಗೆ ಸಹ ಸಾರ್ವಜನಿಕವಾಗಿ ಮಾತನಾಡಬಾರದು ಎಂಬ ಅಘೋಷಿತ ನಿಯಮವಿತ್ತು. ಪೋಷಕರ ಬಳಿ ತಮ್ಮ
ಪ್ರೇಮದ ಬಗ್ಗೆ ಹೇಳಲು ಹೆದರುತ್ತಿದ್ದ ಹುಡುಗ-ಹುಡುಗಿಯರ ಕಾಲವದು. ಆದರೆ ಆ ನಿಯಮ
ಮುರಿದಾಗಿದೆ. ನಾವು ಮುಂದುವರೆದಿದ್ದೇವೆ!
ಆದರೆ ಕಾಮದ ಬಗ್ಗೆ ಮಾತ್ರ ಈಗಲೂ ನಾವು ಮುಕ್ತವಾಗಿ ಮಾತನಾಡಲೊಲ್ಲೆವು. ನಮ್ಮ ಕಾಲೇಜಿನಲ್ಲಿ ಒಮ್ಮೆ ಒಂದು ಚರ್ಚಾಸ್ಪರ್ಧೆ ಏರ್ಪಡಿಸಿದ್ದರು. 'ಯುವಕರ ನೈತಿಕತೆಯ ಅಭಿವೃದ್ಧಿಗೆ ಲೈಂಗಿಕ ಶಿಕ್ಷಣದ ಅಗತ್ಯತೆ ಇದೆಯೇ? ಇಲ್ಲವೇ?' -ಎಂಬುದು ವಿಷಯ. ಸಾಮಾನ್ಯವಾಗಿ ಚರ್ಚಾಸ್ಪರ್ಧೆಗಳಲ್ಲಿ ತುಂಬಾ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದರಾದರೂ ಈ ಸ್ಪರ್ಧೆಗೆ ಹೆಸರು ಕೊಟ್ಟಿದ್ದವರು ಕೇವಲ ಇಬ್ಬರು! ಇಬ್ಬರೂ ಹುಡುಗರು. ನಾನೊಬ್ಬ; ಮತ್ತೊಬ್ಬ ನನ್ನ ಗೆಳೆಯ. ನಾವಾದರೂ ಸ್ಪರ್ಧೆಯ ವಿಷಯವನ್ನು declare ಮಾಡಿದ್ದ ಆ ಲೆಕ್ಚರರ್ರಿಗೆ ಬೇಜಾರಾಗಬಾರದು ಎಂಬ ದೃಷ್ಟಿಯಿಂದ ಸೇರಿದ್ದವರು! ಮಾತನಾಡಲಿಕ್ಕಂತೂ ನಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ರಾಜಕುಮಾರನೆದುರು ಪ್ರೇಮ ನಿವೇದನೆಗೆ ನಿಂತ ರಾಜಕುವರಿಯಂತೆ, ಪೂರ್ತಿ ನೆಲವನ್ನೇ ನೋಡುತ್ತಾ, ಕತ್ತೆತ್ತದೇ, ಒಂದೆರಡು ಮಾತಾಡಿ ಮುಗಿಸುವಷ್ಟರಲ್ಲಿ ಸಾಕುಬೇಕಾಗಿತ್ತು!
ಪೋಲೀ ಜೋಕುಗಳು ಸಮಾನ ವಯಸ್ಕ ಗೆಳೆಯರ/ಗೆಳತಿಯರ ನಡುವೆ ಎಸ್ಸೆಮ್ಮೆಸ್ಸಾಗಿ ಓಡಾಡುತ್ತವೆಯಾದರೂ ಅದೇ ಜೋಕುಗಳು ಹುಡುಗರ ಮೊಬೈಲಿನಿಂದ ಹುಡುಗಿಯರ ಮೊಬೈಲಿಗಾಗಲೀ ಹುಡುಗಿಯರ ಮೊಬೈಲಿನಿಂದ ಹುಡುಗರ ಮೊಬೈಲಿಗಾಗಲೀ ಹರಿದಾಡುವುದೇ ಇಲ್ಲ. ಹುಡುಗರು ಹುಡುಗರ ಜೊತೆ ಮಾತಿಗೆ ಕುಳಿತಾಗ ಅದೆಷ್ಟೋ ಕೆಟ್ಟಾಕೊಳಕ ಜೋಕುಗಳನ್ನು, double meaning ಜೋಕುಗಳನ್ನು ಆಡಿಕೊಂಡು ನಕ್ಕಿರುತ್ತೇವೆ. ಆದರೆ ಅವನ್ನು ನಾವು publicನಲ್ಲಿ ಆಡುವಂತಿಲ್ಲ. ಅಂತಹ ಅನೇಕ ಜೋಕುಗಳು ನಿಮಗೆ ಇಲ್ಲಿ ಸಿಗುತ್ತವೆ.
ಹಾಗಂತ ಇದೇನು ಕೇವಲ ಅಶ್ಲೀಲ ಜೋಕುಗಳ ತಾಣವಲ್ಲ. ಅಶ್ಲೀಲ ಎಂಬ ಪದವೇ ಒಂಥರಾ ಅಶ್ಲೀಲ ಕಣ್ರೀ. ಇಷ್ಟಕ್ಕೂ ಯಾವುದು ಅಶ್ಲೀಲ? ಬಟ್ಟೆ ಬಿಚ್ಚಿದರೆ ಅಶ್ಲೀಲ ಅಂತಲಾ? ಎಷ್ಟು ಬಿಚ್ಚಿದರೆ?? ಮಲ್ಲಿಕಾ ಶೆರಾವತ್‍ನಷ್ಟು? ಅಶ್ಲೀಲತೆಯ ಪರಿಧಿ ಯಾವುದು? ಯಾವುದನ್ನು ಬರೆಯಬಹುದು, ಯಾವುದನ್ನು ಬರೆಯಬಾರದು? ಬರೆದರೆ ಅದಕ್ಕೆ ಪ್ರತಿಕ್ರಿಯೆ ಹೇಗಿರಬಹುದು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕೋಣ,
ಕಾಮ ಬರೆಯಬಾರದ ವಿಷಯವೇನಲ್ಲ. ಕನ್ನಡದಲ್ಲಿ ಜನ್ನ, ಪಂಪರಂತಹ ಆದಿಕವಿಗಳಿಂದ ಹಿಡಿದು ನವ್ಯಕವಿಗಳವರೆಗೆ ಎಲ್ಲರೂ ಕಾಮದ ಬಗ್ಗೆ, ಶೃಂಗಾರದ ಬಗ್ಗೆ ಬರೆದಿದ್ದಾರೆ. ಪುರುಸೊತ್ತಾದಾಗಲೆಲ್ಲ ಹೆಣ್ಣಿನ ಮೊಲೆಯ ಸೆಳಕಿನ ಬಗ್ಗೆ, ಸೊಂಟದ ಬಳುಕಿನ ಬಗ್ಗೆ, ನಿತಂಬದ ಝಳಕಿನ ಬಗ್ಗೆ ತಮ್ಮ ಕಾವ್ಯದಲ್ಲಿ ಬಳಸಿದ್ದಾರೆ. ಶೃಂಗಾರ ರಸಕಾವ್ಯಗಳಿಗೇನೂ ಕೊರತೆಯಿಲ್ಲ ನಮ್ಮಲ್ಲಿ. ನಿನ್ನೆ ತಾನೇ ರವಿ ಬೆಳಗೆರೆ ಬರೆದದ್ದು ಓದುತ್ತಿದ್ದೆ: "ಹೇಳಿದಷ್ಟೂ ಮುಗಿಯುವುದಿಲ್ಲ ಕಾಮದ ಬಗ್ಗೆ; ಅದಕ್ಕೇ ಅದನ್ನು 'ಕೇಳಿ' ಅನ್ನುವುದು!" ಅಂತ. ಹಾಗೆ ಅವರು ಬರೆದ ಕಾವ್ಯಸಾಲುಗಳ ಬಗ್ಗೆ ಸಹ ಇಲ್ಲಿ ಮಾತಾಡೋಣ.
ದಿನನಿತ್ಯವೂ ನಮ್ಮ ಕಣ್ಣೆದುರೇ ನಡೆಯುವ ಅದೆಷ್ಟೋ ಘಟನೆಗಳಲ್ಲಿ, ಆಡುವ ಮಾತುಗಳಲ್ಲಿ ದ್ವಂದ್ವಾರ್ಥಗಳಿರುತ್ತವೆ. 'ಹೀಗೆ' ಹೇಳಿದ್ದನ್ನೇ 'ಹಾಗೆ' ಸಹ ಅರ್ಥ ಮಾಡಿಕೊಳ್ಳಬಹುದು. ಅವನ್ನೇ ನೆನಪಿಟ್ಟುಕೊಂಡು ಒಂದೆಡೆ ಬರೆದಿಟ್ಟರೆ ಮುಂದೆಂದೋ ಬಿಡುವಿದ್ದಾಗ, mood out ಆಗಿದ್ದಾಗ ಓದಿಕೊಂಡು ನಕ್ಕು, ಮನಸ್ಸನ್ನು ಸರಿ ಮಾಡಿಕೊಳ್ಳಬಹುದು. ಖಿನ್ನತೆಗೆ ನಗುವಿನಷ್ಟು ಒಳ್ಳೆಯ ಔಷಧ ಬೇರೆ ಯಾವುದಿದೆ ಹೇಳಿ?
ಅಶ್ಲೀಲತೆಯೆಂಬ ಪರಿಧಿಯನ್ನು ಸ್ವಲ್ಪವೇ ದಾಟಿ, ಆ ಮೋಟುಗೋಡೆಯನ್ನು ಹತ್ತಿ, ಆಚೆ ಇಣುಕಿ ನೋಡಲಿದ್ದೇವೆ. ಕಂಡದ್ದನ್ನು ಕಂಡಹಾಗೆ, ಆದರೂ ತುಂಬಾ ಅಶ್ಲೀಲವಾಗದ ಹಾಗೆ present ಮಾಡಲಿಕ್ಕೆ ಆದಷ್ಟೂ ಪ್ರಯತ್ನ ಮಾಡುತ್ತೇವೆ. ನಿಮ್ಮ ಪ್ರತಿಕ್ರಿಯೆಯನ್ನು ಬಯಸುತ್ತೇವೆ. ನಮ್ಮ ಪ್ರಯತ್ನವನ್ನು ನೀವು ಪ್ರೋತ್ಸಾಹಿಸುತ್ತೀರೋ ಅಥವಾ 'ಛೀ!' ಅನ್ನುತ್ತೀರೋ ಎಂಬ ಅನುಮಾನದಲ್ಲೇ,
-ನಾವು!
[Disclaimer: ಅನೇಕ ಕವಿ/ಲೇಖಕರ ಕವಿತೆ/ಬರಹಗಳನ್ನು ಅವರ ಅನುಮತಿ ಇಲ್ಲದೇ ಈ ಬ್ಲಾಗಿನಲ್ಲಿ ಬಳಸಿಕೊಂಡಿದ್ದೇವೆ. ಕೆಲ ವೆಬ್‌ಸೈಟ್‌ಗಳಲ್ಲಿ ಸಿಕ್ಕ ಚಿತ್ರಗಳನ್ನು ಹಾಕಿದ್ದೇವೆ. ಲಿಂಕ್ಸ್ ಕೊಟ್ಟುಕೊಂಡಿದ್ದೇವೆ. ಇದಕ್ಕೆ ಸಂಬಂಧಿಸಿದವರ ವಿರೋಧವಿದ್ದರೆ ದಯವಿಟ್ಟು ನಮಗೆ ತಿಳಿಸಿ. ತಕ್ಷಣ ಅದನ್ನು ಇಲ್ಲಿಂದ ತೆಗೆಯಲಾಗುವುದು.]

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ