ಪೋಸ್ಟ್‌ಗಳು

ಜೂನ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರಬ್ಬರ್ ಬಳಸಬೇಕಿತ್ತು !!

ಒಬ್ಬ ತನ್ನ ಹತ್ತು ಮಕ್ಕಳ ಜೊತೆ ಬಸ್ಸು ಹತ್ತಿದ ......ಬಸ್ಸ ರಷ್ ಆಗಿತ್ತು. ಅಂತಾದ್ರಲ್ಲಿ ಒಬ್ಬ ತಾತ ಕೋಲು ನೆಲಕ್ಕೆ ತಾಗಿಸುತ್ತಾ ಟಕ್ ಟಕ್ ಅಂತ ಸೌಂಡ್ ಮಾಡ್ತಾ ಬರ್ತಾ ಇದ್ದ. ಆಗ ಆ ಹತ್ತು ಮಕ್ಕಳ ತಂದೆ ಹೇಳಿದ-"...

ಮೊದಲ ಮಾತು

ನಮ್ಮಲ್ಲಿ ಇತ್ತೀಚಿನ ವರೆಗೂ ಪ್ರೀತಿಯ ಬಗ್ಗೆ ಸಹ ಸಾರ್ವಜನಿಕವಾಗಿ ಮಾತನಾಡಬಾರದು ಎಂಬ ಅಘೋಷಿತ ನಿಯಮವಿತ್ತು. ಪೋಷಕರ ಬಳಿ ತಮ್ಮ ಪ್ರೇಮದ ಬಗ್ಗೆ ಹೇಳಲು ಹೆದರುತ್ತಿದ್ದ ಹುಡುಗ-ಹುಡುಗಿಯರ ಕಾಲವದು. ಆದರೆ ಆ ನಿಯಮ ಮುರಿದಾಗಿದೆ. ನಾವು ಮುಂದುವರೆದಿದ್ದೇವೆ! ಆದರೆ ಕಾಮದ ಬಗ್ಗೆ ಮಾತ್ರ ಈಗಲೂ ನಾವು ಮುಕ್ತವಾಗಿ ಮಾತನಾಡಲೊಲ್ಲೆವು. ನಮ್ಮ ಕಾಲೇಜಿನಲ್ಲಿ ಒಮ್ಮೆ ಒಂದು ಚರ್ಚಾಸ್ಪರ್ಧೆ ಏರ್ಪಡಿಸಿದ್ದರು. 'ಯುವಕರ ನೈತಿಕತೆಯ ಅಭಿವೃದ್ಧಿಗೆ ಲೈಂಗಿಕ ಶಿಕ್ಷಣದ ಅಗತ್ಯತೆ ಇದೆಯೇ? ಇಲ್ಲವೇ?' -ಎಂಬುದು ವಿಷಯ. ಸಾಮಾನ್ಯವಾಗಿ ಚರ್ಚಾಸ್ಪರ್ಧೆಗಳಲ್ಲಿ ತುಂಬಾ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದರಾದರೂ ಈ ಸ್ಪರ್ಧೆಗೆ ಹೆಸರು ಕೊಟ್ಟಿದ್ದವರು ಕೇವಲ ಇಬ್ಬರು! ಇಬ್ಬರೂ ಹುಡುಗರು. ನಾನೊಬ್ಬ; ಮತ್ತೊಬ್ಬ ನನ್ನ ಗೆಳೆಯ. ನಾವಾದರೂ ಸ್ಪರ್ಧೆಯ ವಿಷಯವನ್ನು declare ಮಾಡಿದ್ದ ಆ ಲೆಕ್ಚರರ್ರಿಗೆ ಬೇಜಾರಾಗಬಾರದು ಎಂಬ ದೃಷ್ಟಿಯಿಂದ ಸೇರಿದ್ದವರು! ಮಾತನಾಡಲಿಕ್ಕಂತೂ ನಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ರಾಜಕುಮಾರನೆದುರು ಪ್ರೇಮ ನಿವೇದನೆಗೆ ನಿಂತ ರಾಜಕುವರಿಯಂತೆ, ಪೂರ್ತಿ ನೆಲವನ್ನೇ ನೋಡುತ್ತಾ, ಕತ್ತೆತ್ತದೇ, ಒಂದೆರಡು ಮಾತಾಡಿ ಮುಗಿಸುವಷ್ಟರಲ್ಲಿ ಸಾಕುಬೇಕಾಗಿತ್ತು! ಪೋಲೀ ಜೋಕುಗಳು ಸಮಾನ ವಯಸ್ಕ ಗೆಳೆಯರ/ಗೆಳತಿಯರ ನಡುವೆ ಎಸ್ಸೆಮ್ಮೆಸ್ಸಾಗಿ ಓಡಾಡುತ್ತವೆಯಾದರೂ ಅದೇ ಜೋಕುಗಳು ಹುಡುಗರ ಮೊಬೈಲಿನಿಂದ ಹುಡುಗಿಯರ ಮೊಬೈಲಿಗಾಗಲೀ ಹುಡುಗಿಯರ ...